ಬೆಂಗಳೂರು: ಕನ್ನಡದ ಸೂಪರ್‌ಸ್ಟಾರ್ ನಟ ಉಪೇಂದ್ರ ಹಾಗೂ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಂದು ಮುಂಜಾನೆ ಮೊಬೈಲ್‌ ಕರೆ ಬಂದಿದೆ, ಯಾವುದೋ ವಸ್ತುಗಾಗಿ ಆರ್ಡ್‌ರ ಮಾಡಿ ಕಾಯುತ್ತಿದ ಪ್ರಿಯಾಂಕ್‌ ಅವರು ಕರೆ ಮಾಡಿದಾತ ಹೇಳಿದಂತೆ ಹ್ಯಾಷ್‌ಟ್ಯಾಗ್‌ ಹಾಗೂ ಅವನು ಹೇಳುವ ನಂಬರಗಳನ್ನು ಒತ್ತಿದ್ದಾರೆ, ನಟ ಉಪೇಂದ್ರ ಅವರಿಗೆ ಈ ಬಗ್ಗೆ ಅನುಮಾನ ಮೂಡಿ ಕೂಡಲೇ ತಮ್ಮ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ತಮ್ಮ ಸಂದೇಶದಲ್ಲಿ, “ನನ್ನ ಅಥವಾ ನನ್ನ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ಯಾರಾದರೂ ಕರೆ ಮಾಡಿ ಅಥವಾ ಮೆಸೇಜ್ ಮೂಲಕ ದುಡ್ಡು ಕೇಳಿದರೆ, ದಯವಿಟ್ಟು ಯಾವುದೇ ರೀತಿಯ ಹಣ ಕೊಡಬೇಡಿ. ಇದು ಸಂಪೂರ್ಣ ಹ್ಯಾಕ್ ಆಗಿರುವ ಪ್ರಕರಣ” ಎಂದು ಮನವಿ ಮಾಡಿದ್ದಾರೆ.

ಈ ಘಟನೆ ತಂತ್ರಜ್ಞಾನ ಮುಂದುವರಿದಂತೆ ಸೈಬರ್ ಅಪರಾಧಗಳು ಯಾವ ಮಟ್ಟಿಗೆ ಬೆಳೆದುಬಂದಿವೆ ಎಂಬುದಕ್ಕೆ ಉದಾಹರಣೆಯಾಗಿದೆ. ಪ್ರಸ್ತುತ ಹ್ಯಾಕರ್‌ಗಳು ಅವರ ಮೊಬೈಲ್‌ನಿಂದ ಹಣದ ಬೇಡಿಕೆಗಳನ್ನು ಕಳುಹಿಸುತ್ತಿದ್ದಾರೆ ಎಂಬ ವರದಿಗಳು ಲಭ್ಯವಾಗಿವೆ.

ಸೈಬರ್ ಸೆಕ್ಯುರಿಟಿ ತಜ್ಞರ ಪ್ರಕಾರ, ಹ್ಯಾಕಿಂಗ್ ಪ್ರಕರಣದಲ್ಲಿ ಸಾಮಾನ್ಯವಾಗಿ OTP, ಲಿಂಕ್ ಕ್ಲಿಕ್, ಡೌನ್‌ಲೋಡ್, ಅಥವಾ ಫಿಶಿಂಗ್ ತಂತ್ರಗಳು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಸಾಧಾರಣ ಲಿಂಕ್‌ಗಳನ್ನು ತೆರೆಯದಂತೆ, ಅಪರಿಚಿತ ಸಂಖ್ಯೆಗಳ ಕರೆಗಳಿಗೆ ಪ್ರತಿಕ್ರಿಯಿಸದಂತೆ, ಹಾಗೂ ಬ್ಯಾಂಕ್/ಯುಪಿಐ ವಿವರಗಳನ್ನು ಹಂಚಿಕೊಳ್ಳದಂತೆ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಹ್ಯಾಕಿಂಗ್ ಘಟನೆ ಕಲಾವಿದರಷ್ಟೇ ಅಲ್ಲದೆ ಸಾಮಾನ್ಯ ಜನರು ಸಹ ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *