ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ನೀಡಲು ಮುಂದಿನ ದಿನಗಳಲ್ಲಿ 24 ಗಂಟೆಯೊಳಗೆ ಬಿಪಿಎಲ್ ಕಾರ್ಡ್‌ (BPL ration card ) ವಿತರಣೆ ಸಂಬಂಧ ಪ್ರತ್ಯೇಕ ಪೋರ್ಟಲ್ ಸೇವೆ ಆರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್‌. ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿ ಗುರುವಾರ ಬಿಜೆಪಿಯ ಭರತ್‌ಶೆಟ್ಟಿ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಅನಾರೋಗ್ಯದಿಂದ ಬಳಲುತ್ತಿರುವವರು ತ್ವರಿತವಾಗಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ಬರುವ ದಿನಗಳಲ್ಲಿ 24 ಗಂಟೆಯೊಳಗೆ ಬಿಪಿಎಲ್ ವಿತರಣೆ ಸಂಬಂಧ ಪ್ರತ್ಯೇಕ ಪೋರ್ಟಲ್ ಸೇವೆ ಆರಂಭಿಸಲಾಗುವುದು ಎಂದರು.

ಪೋರ್ಟಲ್‌ ಆರಂಭ: ಶಾಸಕರಾದ ಕೆ.ಗೋಪಾಲಯ್ಯ ಸೇರಿದಂತೆ ಹಲವರು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಬಿಪಿಎಲ್‌ಕಾರ್ಡ್‌ದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿದಾಗ, ಪ್ರತ್ಯೇಕ ಪೋರ್ಟಲ್‌ಮಾಡುವುದು. ಪೋರ್ಟಲ್‌ನಲ್ಲಿ ಅರ್ಹ ಸಾಮಾನ್ಯರು  ಸಹ ಅರ್ಜಿ ಸಲ್ಲಿಸ ಬಹುದಾಗಿದೆ.  ಅನಾರೋಗ್ಯದಿಂದ ಬಳಲುತ್ತಿರುವವರ ಅರ್ಜಿಗಳನ್ನುಆದ್ಯತೆ ಮೇರೆಗೆ ಪರಿಗಣಿಸಿ ಕಾರ್ಡ್‌ವಿತರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

13 ಲಕ್ಷ ಅನರ್ಹರು: ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್‌ಕಾರ್ಡ್‌ದಾರರಿದ್ದಾರೆ.  ಆ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಲಾಗುವುದು. ಅನರ್ಹ ಬಿಪಿಎಲ್‌ ಕುಟುಂಬಗಳ ಕಾರ್ಡ್‌ಗಳನ್ನು ರದ್ದು ಪಡಿಸುವುದಿಲ್ಲ. ಅವರು ಎಪಿಎಲ್‌ ಕಾರ್ಡ್‌ ನೀಡಲಾಗುವುದು. ಬಿಪಿಎಲ್‌ ಪಡೆದಿರುವ ಅನರ್ಹರು ಎಪಿಎಲ್ ಪಡೆದರೆ ಅರ್ಹ ಬಿಪಿಎಲ್ ಕುಟುಂಬಗಳಿಗೆ ಮುಂದಿನ ತಿಂಗಳಿನಿಂದ ಬಿಪಿಎಲ್ ಕಾರ್ಡ್ ವಿತರಣೆಗೆ ಅರ್ಜಿ ಸ್ವೀಕಾರ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಸದನದಲ್ಲಿ ತಿಳಿಸಿದರು.

ರಾಜ್ಯದಲ್ಲೇ ಹೆಚ್ಚು ಬಿಪಿಎಲ್‌ ಫಲಾನುಭವಿಗಳು: ರಾಜ್ಯದಲ್ಲಿ 25 ಲಕ್ಷ ಎಪಿಎಲ್‌ಕಾರ್ಡ್‌ದಾರರಿದ್ದು, 1 ಲಕ್ಷ ಜನ ಅಕ್ಕಿ ಪಡೆಯುತ್ತಿರಲಿಲ್ಲ. ಆದ್ದರಿಂದ ಎಪಿಎಲ್‌ಕಾರ್ಡ್‌ಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು ಕಾರ್ಡ್‌ದಾರರ ಪೈಕಿ ಶೇಕಡ 75ರಷ್ಟು ಬಿಪಿಎಲ್‌ಕಾರ್ಡ್‌ಗಳಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಶೇಕಡ 50ರಷ್ಟು ಬಿಪಿಎಲ್‌ಕಾರ್ಡ್‌ಗಳಿವೆ. ಆದರೆ ರಾಜ್ಯದಲ್ಲಿ  ಶೇ.70  ರಷ್ಟು ಬಿಪಿಎಲ್‌ ಫಲಾನುಭವಿಗಳು ಇದ್ದಾರೆ ಎಂದರು.

ಅನರ್ಹರನ್ನು ರಾಜ್ಯ- ಕೇಂದ್ರ ಸರ್ಕಾರದಿಂದ ಮಾನದಂಡ: ಬಿಪಿಎಲ್‌ಫಲಾನುಭವಿ ಗುರುತಿಸಲು ಕೇಂದ್ರ ಸರ್ಕಾರ 11 ಹಾಗೂ ರಾಜ್ಯ ಸರ್ಕಾರ 5 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡ ಪಾಲಿಸಿದರೆ ಬಿಪಿಎಲ್‌ಫಲಾನುಭವಿಗಳ ಸಂಖ್ಯೆ 35ಕ್ಕೆ ಇಳಿಕೆಯಾಗುತ್ತದೆ ಎಂದಿದ್ದರು.

ಅರ್ಹರ ಕಾರ್ಡ್‌ರದ್ದುಗೊಂಡರೆ ಮರು ಮನವಿ : ಒಂದು ವೇಳೆ ಬಿಪಿಎಲ್‌ಕಾರ್ಡ್‌ನ  ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ತಹಶೀಲ್ದಾರ್‌ಅವರಿಗೆ ಮನವಿ ಸಲ್ಲಿಸಬಹುದು. ತಕ್ಷಣವೇ ಅವರಿಗೆ ಬಿಪಿಎಲ್‌ಕಾರ್ಡ್‌ನೀಡುವುದಾಗಿ ಭರವಸೆ ನೀಡಿದರು. ಅನರ್ಹ ಬಿಪಿಎಲ್‌ಕಾರ್ಡ್‌ದಾರರಿಗೆ ಹೊಸದಾಗಿ ಎಪಿಎಲ್‌ನೀಡಲು ಹಾಗೂ ಅನರ್ಹರ ಪರಿಷ್ಕರಣೆಯ ನಂತರ ಮುಂದಿನ ತಿಂಗಳಲ್ಲಿ ಹೊಸದಾಗಿ ಬಿಪಿಎಲ್‌ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷಪಡಿಸಿದರು.

ಸೆಪ್ಟೆಂಬರ್‌ ತಿಂಗಳಲ್ಲಿಹೊಸ ಕಾರ್ಡಗಳು:  ಎರಡು ವರ್ಷಗಳಿಂದ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆದಿಲ್ಲ. ಅನರ್ಹ ಕಾರ್ಡ್‌ದಾರರು ಎಪಿಎಲ್‌ ಕಾರ್ಡ್‌ ಪಡೆದರೆ ಅರ್ಹ ಕುಟುಂಬಗಳಿಗೆ ಕಾರ್ಡ್‌ ಸಿಗಲಿದೆ. ಈ ಪ್ರಕ್ರಿಯೆ ತ್ವರಿತವಾಗಿ ಮುಗಿದರೆ ಮುಂದಿನ ತಿಂಗಳು ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ ಆರಂಭಿಸಲು ಚಿಂತಿಸಲಾಗಿದೆ,  ಸೆಪ್ಟೆಂಬರ್‌ನಲ್ಲಿ ಹೊಸ ಬಿಪಿಎಲ್‌ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸದನದಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *