ಬೆಂಗಳೂರು: ಟ್ರಂಪ್ ಟ್ಯಾರಿಫ್ ಮತ್ತು ಒತ್ತಡಗಳ ಮಧ್ಯೆ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಹೂಡಿಕೆ ಮುಂದುವರಿಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಫಾಕ್ಸ್ ಕಾನ್ ಕರ್ನಾಟಕದಲ್ಲಿ ಐ ಪೋನ್‌ಗಳ ಉತ್ಪಾದನೆ ಆರಂಭಿಸಿದೆ. ವಿಶ್ವದ ಬಹುಬೇಡಿಕೆಯ ಫೋನ್‌ಗಳಲ್ಲಿ ಒಂದಾಗಿರುವ ಐಫೋನ್ ತನ್ನ ಮುಂಬರುವ ಮಾದರಿ ಐಫೋನ್ 17(iPhone 17) ರ ಉತ್ಪಾದನೆಯನ್ನುರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ಪಾದನೆ ಪ್ರಾರಂಭಿಸಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಫಾಕ್ಸ್ ಕಾನ್ ಮೂಲಕ ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ ತಯಾರಿಸುವ ತನ್ನ ಯೋಜನೆಯನ್ನು ಮುಂದುವರಿಸಿದೆ. ರಾಜ್ಯದಲ್ಲಿ ಐಫೋನ್ ಉತ್ಪಾದನೆ ಕುರಿತಂತೆ ಸಚಿವ ಎಂ.ಬಿ.ಪಾಟೀಲ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರು ಸಮೀಪದ ದೇವನಹಳ್ಳಿಯ ಹೊಸ ಘಟಕದಲ್ಲಿ ಫಾಕ್ಸ್ ಕಾನ್ ತನ್ನ ಇತ್ತೀಚಿನ #iPhone17 ಉತ್ಪಾದನೆಯನ್ನು ಪ್ರಾರಂಭಿಸಿರುವುದನ್ನು ಹರ್ಷದಿಂದ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಎರಡನೇ ಅತಿದೊಡ್ಡ ಘಟಕ: ರಾಜ್ಯದಲ್ಲಿ ಐಫೋನ್ 17ರ ಉತ್ಪಾದನೆಯು ಚೀನಾದ ಹೊರಗಿನ ಫಾಕ್ಸ್ ಕಾನ್‌ನ ಎರಡನೇ ಅತಿದೊಡ್ಡ ಘಟಕವಾಗಿದೆ ಎಂದಿದ್ದಾರೆ. ಈ ಘಟಕವು $2.8 ಬಿಲಿಯನ್ (₹25,000 ಕೋಟಿ) ಹೂಡಿಕೆಯಿಂದ ನಿರ್ಮಿತವಾಗಿದೆ ಎಂದು ತಿಳಿಸಿದ್ದಾರೆ.

ಸಾವಿರಾರು ಉದ್ಯೋಗ ಸೃಷ್ಟಿ: ಈ ಸಾಧನೆ ಕೇವಲ ಸ್ಮಾರ್ಟ್ ಫೋನ್ ಗಳ ಅಸೆಂಬ್ಲಿ ಕುರಿತು ಮಾತ್ರವಲ್ಲ, ಕರ್ನಾಟಕವು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವುದಕ್ಕೆ ಮತ್ತೊಂದು ಮಹತ್ವದ ಸಾಕ್ಷಿ ಆಗಿದೆ. ಈ ಘಟಗಳಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಪೂರೈಕೆ ಸರಪಳಿಗಳು ಬಲವಾಗುತ್ತಿವೆ ಎಂದಿದ್ದಾರೆ.

ಭಾರತವೇ ವಿಶ್ವದ ಐಫೋನ್ ರಾಜಧಾನಿ: ರಾಜ್ಯದಲ್ಲಿ ಉತ್ಪನಗಳ ತಯಾರಿಕೆಯಿಂದ ಭಾರತದ ರಫ್ತು ಗುರಿಗಳಿಗೆ ಹೊಸ ಶಕ್ತಿ ಸಿಗುತ್ತಿದೆ. ಆಪಲ್ ಭಾರತದ ತನ್ನ ಉತ್ಪಾದನೆಯನ್ನು ವೇಗವಾಗಿ ವಿಸ್ತರಿಸುತ್ತಿದ್ದು, “ಭಾರತವೇ ವಿಶ್ವದ ಐಫೋನ್ ರಾಜಧಾನಿ” ಆಗುವ ಹಾದಿಯಲ್ಲಿ #ನಮ್ಮ ಬೆಂಗಳೂರು ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.

ಆರಂಭಿಕ ಸವಾಲು: ಫಾಕ್ಸ್ ಕಾನ್‌ ಘಟಕ ಆರಂಭಿಕ ಸವಾಲುಗಳಿದ್ದರೂ, ಫಾಕ್ಸ್ ಕಾನ್ ಕಾರ್ಯಾಚರಣೆಗಳು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇದರೊಂದಿಗೆ ಕರ್ನಾಟಕದ ಬಲಿಷ್ಠ ಕೈಗಾರಿಕಾ ಪರಿಸರದ ಮೇಲೆ ಹೂಡಿಕೆದಾರರ ವಿಶ್ವಾಸ ಮತ್ತಷ್ಟು ವೃದ್ಧಿಯಾಗುತ್ತಿದೆ ಎಂದಿದ್ದಾರೆ.

One thought on “iPhone17: ಭಾರತವೇ ವಿಶ್ವದ ಐಫೋನ್ ರಾಜಧಾನಿ”

Leave a Reply

Your email address will not be published. Required fields are marked *